ಆನ್‌ಲೈನ್‌ನಲ್ಲಿ ಸುಲಭವಾಗಿ ಡ್ರೈವಿಂಗ್ ಲೈಸೆನ್ಸ್ ಮಾಡಿಸುವುದು ಹೇಗೆ: ಇಲ್ಲಿದೆ ಸರಳ ವಿದಾನ.
![]() |
Driving licence |
ಸಮಯದ ಅಭಾವ ಯಾರಿಗೆ ತಾನೆ ಇರೊಲ್ಲ. ಎಲ್ಲರಿಗೂ ಇರುತ್ತೆ. ಹೊಸದಾಗಿ ಆಧಾರ್ ಕಾರ್ಡ್, ವೋಟರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಖಾತೆ, ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಪಡೆಯುವವರಿಗಂತೂ ಸಮಯದ ಅಭಾವ ಜಾಸ್ತಿನೆ. ಯಾಕಂದ್ರೆ ಇವುಗಳನ್ನು ಪಡೆಯಲು ಕಛೇರಿಗಳಿಗೆ ಹೋಗಿ ಸಾಲಲ್ಲಿ ನಿಲ್ಲಬೇಕು, ಅಧಿಕಾರಿಗಳು ಹೇಳಿದ ಸಮಯಕ್ಕೆ ಹೋಗಬೇಕು. ಈ ಐಡಿಗಳನ್ನು ಪಡೆಯಲು ಇತರೆ ಆಧಾರಗಳನ್ನು ನೀಡಬೇಕು. ಆದ್ದರಿಂದ ಸಾಕಪ್ಪ ಸಾಕು ಈ ಗೋಳು ಎನ್ನುವವರೇ ಜಾಸ್ತಿ.
ಅಂದಹಾಗೆ ಇನ್ನೂ ಬೆಂಗಳೂರಿನಂತ ನಗರ ಪ್ರದೇಶ ವಾಸಿಗಳಿಗೆ ಅಥವಾ ದಿನನಿತ್ಯ ಬ್ಯುಸಿ ಲೈಫ್ ಲೀಡ್ ಮಾಡುವವರಿಗೆ ಮೇಲೆ ತಿಳಿಸಿದ ಐಡಿಗಳನ್ನು ಪಡೆಯಲು ಸಮಯಾನೇ ಇಲ್ಲಾ ಅಂತಾರೆ. ಯಾಕಂದ್ರೆ ಮೇಲೆ ತಿಳಿಸಿದ ಯಾವುದೇ ಐಡಿಗಳನ್ನು ಒಂದು ದಿನದಲ್ಲಿ ಪಡೆಯಲು ಸಾಧ್ಯವಿಲ್ಲ. ಆದ್ರೆ ಇತ್ತೀಚಿನ ದಿನಗಳಲ್ಲಿ ಎಲ್ಲಾ ಸರ್ಕಾರಿ ಸೇವೆಗಳು ಸಹ ಸುಲಭವಾಗಿ ದೊರೆಯುತ್ತಿವೆ.
Best electronic gadgetsಭಾರತದಾದ್ಯಂತ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ಆಯಾ ರಾಜ್ಯದವರು ತಮ್ಮ ತಮ್ಮ ರಾಜ್ಯಗಳ ಅಧಿಕೃತ ಆರ್‌ಟಿಓ ವೆಬ್‌ಸೈಟ್ ಮುಖಾಂತರ ಅರ್ಜಿಸಲ್ಲಿಸಬೇಕು.
Best computer 2024ಆನ್‌ಲೈನ್ ಮೂಲಕವೇ ಚಾಲನಾ ಪರವಾನಿಗೆ( ಡಿಎಲ್) ಪಡೆಯಲು ಅರ್ಜಿಗಳನ್ನು ಸಲ್ಲಿಸುವ ಕ್ರಮ ಈಗ ಮತ್ತಷ್ಟು ಸರಳವಾಗಿದೆ. ಮನೆಯಿಂದಲೇ ಡಿಎಲ್ ಅನ್ನು ಈಗ ಸುಲಭವಾಗಿ ಪಡೆಯಬಹುದಾಗಿದ್ದು, ಚಾಲನಾ ಲೈಸೆನ್ಸ್ ಪಡೆಯಲು ಮದ್ಯವರ್ತಿಗಳ ಹಾವಳಿ ಇಲ್ಲದೇ ನೇರವಾಗಿ ಅರ್ಜಿ ಸಲ್ಲಿಸಬಹುದಾದ ನೂತನ ಸಾರಿಗೆ ಆ್ಯಪ್ ಇದೆ.
ಚಾಲನಾ ಪರವಾನಿಗೆ( ಡಿಎಲ್) ಪಡೆಯಲು ಅರ್ಜಿಗಳನ್ನು ಸಲ್ಲಿಸುವ ಮೊದಲು ನೀವು ಕಲಿಕಾ ಪರವಾನಿಗೆ ಹೊಂದಿರಬೇಕು. ಆದ್ದರಿಂದ ಮೊದಲು ಕಲಿಕಾ ಪರವಾನಿಗೆ ಅರ್ಜಿಸಲ್ಲಿಸಲು ಈ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ
![]() |
Apply for learner licence |
- ಅರ್ಜಿ ಸಲ್ಲಿಸುವ ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ ಮೇಲಿನ ಚಿತ್ರದಲ್ಲಿ ತೋರಿಸಿರವಂತೆ apply for learner licence ಎಂಬ ಬಟನ್ ಅನ್ನು ಒತ್ತಬೇಕು.
- ನಂತರ continue ಎಂಬ ಬಟನ್ ಕ್ಲಿಕ್ ಮಾಡಿ
- ನೀವೇನಾದರೂ aadhaar KYC ಮುಖಾಂತರ apply ಮಾಡುವುದಾದರೆ ಮೊದಲನೇ ಆಪ್ಷನ್ ಕ್ಲಿಕ್ ಮಾಡಿ
- Manual ಆಗಿ ಅಪ್ಲೈ ಮಾಡುವುದಾದರೆ ಎರಡನೇ ಆಪ್ಷನ್ ಕ್ಲಿಕ್ ಮಾಡಿ.
- ನಂತರ ನಿಮ್ಮ ಮೊಬೈಲ್ ನಂಬರ್ ಎಂಟ್ರಿ ಮಾಡಿ. ಮತ್ತು OTP ಎಂಟ್ರಿ ಮಾಡಿ AuthenticateWithSarathi ಬಟನ್ ಕ್ಲಿಕ್ ಮಾಡಿ.
- ನಂತರ ನಿಮ್ಮ ಎಲ್ಲಾ ವಿವರಗಳನ್ನು ಸರಿಯಾಗಿ fill ಮಾಡಿ
- ನೀವು ಯಾವ ವಾಹನದ DL ಗೆ ಅಪ್ಲೈ ಮಾಡಬೇಕು ಅದನ್ನ ಸೆಲೆಕ್ಟ್ ಮಾಡಿಕೊಂಡು ok ಕ್ಲಿಕ್ ಮಾಡಿ
- ನಂತರ ಮೇಲೆ ತೋರಿಸಿರುವ button ಕ್ಲಿಕ್ ಮಾಡಿ ನಂತರ ನಿಮಗೆ ಬೇಕಾದ ಎಲ್ಲಾ ವಾಹನಗಳನ್ನು ಸೆಲೆಕ್ಟ್ ಮಾಡಿಕೊಂಡು submit ಮಾಡಿ
- ಮೇಲೆ ತೋರಿಸಿರುವಂತೆ ಸೆಲ್ಫ್ diclairation yes/no ಕ್ಲಿಕ್ ಮಾಡಿ ಕೆಳಗಿನ check box ಕ್ಲಿಕ್ ಮಾಡಿ submit ಬಟನ್ ಕ್ಲಿಕ್ ಮಾಡಿ.
- ನಂತರ ನಿಮ್ಮ documents ಅನ್ನು ಅಪ್ಲೋಡ್ ಮಾಡಿ ಹಾಗೂ ನಿಮ್ಮ ಫೋಟೋ ಮತ್ತು ನಿಮ್ಮ ಸಿಗ್ನೇಚರ್ ಅಪ್ಲೋಡ್ ಮಾಡಿ submit ಮಾಡಿ.
- ನಂತರ applicable ಆಗುವ fees ಅನ್ನು ಪೇ ಮಾಡಿ.
- ನಿಮ್ಮ documents verification ಆದ ನಂತರ ನಿಮಗೆ ಒಂದು LL TEST ಪಾಸ್ವರ್ಡ್ ಮೆಸೇಜ್ ಬರುತ್ತದೆ. ಆ ಪಾಸ್ವರ್ಡ್ ಮುಖಾಂತರ ನೀವು ನಿಮ್ಮ LL TEST attend ಮಾಡಬಹುದು. ( ನಿಮ್ಮ documents verification ಪೆಂಡಿಂಗ್ ಇದ್ದರೆ ನೀವು ಅಪ್ಲೋಡ್ ಮಾಡಿದ documents ಮತ್ತು ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಂಡು ನಿಮ್ಮ RTO ಆಫೀಸಿಗೆ ಹೋಗಿ ನೀವು ವೇರಿಫಿಕೇಷನ್ ಮಾಡಿಸಿಕೊಳ್ಳಬೇಕು. )
- ನಿಮ್ಮ LL TEST ಪಾಸ್ ಆದರೆ ನಿಮಗೆ Learner licence ನಂಬರ್ ಸಿಗುತ್ತದೆ. ಇದಾದ 30 ದಿನಗಳ ನಂತರ ನೀವು driving licence ಗೆ ಅರ್ಜಿ ಸಲ್ಲಿಸಬಹುದು.
ನಿಮಗೆ learner licence ದೊರಕಿದ 30 ದಿನಗಳ ನಂತರ Driving licence ಗೆ ಅರ್ಜಿ ಸಲ್ಲಿಸುವ ವಿಧಾನ.
- Driving licence ಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ.
- ಮೇಲಿನ ಲಿಂಕನ್ನು ಕ್ಲಿಕ್ ಮಾಡಿದ ನಂತರ ಮೇಲೆ ಚಿತ್ರದಲ್ಲಿ ತೋರಿಸಿರುವಂತೆ Apply for Driving licence ಎಂಬ ಬಟನ್ ಕ್ಲಿಕ್ ಮಾಡಿ.
- ನಂತರ ನಿಮ್ಮ learner licence ನ ನಂಬರ್ ಹಾಗೂ ನಿಮ್ಮ ಹುಟ್ಟಿದ ದಿನಾಂಕ ಎಂಟರ್ ಮಾಡಿ submit ಕೊಡಿ.
- ಆಗ ನಿಮ್ಮ ಎಲ್ಲಾ ವಿವರಗಳು ನಿಮಗೆ ಕಾಣಿಸುತ್ತದೆ ಅದನ್ನ ಪರಿಶೀಲಿಸಿ next ಬಟನ್ ಕ್ಲಿಕ್ ಮಾಡಿ.
- ನಂತರ ನಿಮಗೆ ಅಪ್ಲಿಕೇಶನ್ ರೆಫರೆನ್ಸ್ ಸ್ಲಿಪ್ ಓಪನ್ ಆಗುತ್ತದೆ. ಅದರಲ್ಲಿ ನಿಮ್ಮ ಅಪ್ಲಿಕೇಶನ್ ನಂಬರ್ ಅನ್ನು ಗಮನದಲ್ಲಿ ಇಟ್ಟುಕೊಳ್ಳಿ. ನಂತರ next ಬಟನ್ ಮೇಲೆ ಕ್ಲಿಕ್ ಮಾಡಿ.
- ಅದಾದ ಬಳಿಕ ನೀವು ನಿಮಗೆ ಬೇಕಾದ payment method ನ ಸೆಲೆಕ್ಟ್ ಮಾಡಿಕೊಂಡು ಅಪ್ಲಿಕೇಶನ್ ಫೀಸ್ ನ ಪೇ ಮಾಡಿ.
- ನಂತರ ನಿಮಗೆ ಬೇಕಾದ ದಿನಾಂಕದಂದು driving test ನ slot book ಮಾಡಿಕೊಂಡು ಡ್ರೈವಿಂಗ್ ಟೆಸ್ಟ್ ಗೆ ಹೋಗಬೇಕು.
- ಡ್ರೈವಿಂಗ್ ಟೆಸ್ಟ್ ಪಾಸ್ ಆದ ಬಳಿಕ ಒಂದೆರಡು ದಿನದ ಒಳಗೆ ನಿಮ್ಮ ಮೊಬೈಲ್ ನಂಬರ್ ಗೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ನಂಬರ್ ಮೆಸೇಜ್ ಮೂಲಕ ಬರುತ್ತದೆ.
- ನಂತರ ಸುಮಾರು 15 ದಿನಗಳಲ್ಲಿ ನಿಮ್ಮ ಡ್ರೈವಿಂಗ್ ಲೈಸೆನ್ಸ್ post ಮುಖಾಂತರ ನಿಮ್ಮ ಮನೆಗೆ ಬರುತ್ತದೆ.
ಈ ರೀತಿ ನೀವು ಸುಲಭವಾಗಿ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳಬಹುದು.
ಇಂತಹ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಅವರು ಕೂಡ ಈ ಮಾಹಿತಿಯ ಉಪಯೋಗ ಪಡೆದುಕೊಳ್ಳಲಿ.
Post a Comment
0Comments