![]() |
ಕನ್ನಡ ಧ್ವಜ |
ಕರ್ನಾಟಕದ ಧ್ವಜ. ಈ ಧ್ವಜವನ್ನು ಎರಡು ಸಮತಲ ಭಾಗಗಳಾಗಿ ಮಾಡಲಾಗಿದೆ. ಬಾವುಟದ ಮೇಲಿನ ಭಾಗವು ಹಳದಿ ಮತ್ತು ಕೆಳಗಿನ ಭಾಗವು ಕೆಂಪು ಬಣ್ಣದ್ದಾಗಿದೆ. ಹಳದಿ ಬಣ್ಣವು ಶಾಂತಿಯನ್ನು ಮತ್ತು ಕೆಂಪು ಬಣ್ಣವು ಧೈರ್ಯವನ್ನು ಸೂಚಿಸುತ್ತದೆ.(ಕನ್ನಡನಾಡಿನ ಹೆಣ್ಣು ಮಗಳ ಅರಿಶಿನ ಮತ್ತು ಕುಂಕುಮದ ಪ್ರತೀಕವೂ ಸಹ). ಈ ಧ್ವಜ ಕರ್ನಾಟಕದ ಅಧಿಕೃತ ಅಥವಾ ಅನಧಿಕೃತ ಧ್ವಜ ಅಲ್ಲ.ಆದರೂ ಇದೂ ಅಧಿಕೃತವಾಗಿ ಕನ್ನಡ ನಾಡನ್ನು ಸೂಚಿಸುತ್ತದೆ. ಸರ್ಕಾರ ಮತ್ತು ಜನರು ಅಧಿಕೃತವಾಗಿ ಬಳಸುತ್ತಾರೆ.
- ಧ್ವಜದ ಹಳದಿ ಬಣ್ಣವು ಅರಿಶಿಣ ಮತ್ತು ಕೆಂಪು ಬಣ್ಣವು ಕುಂಕುಮದ ಸಂಕೇತವಾಗಿದೆ. ಇವೆರಡು ವಸ್ತುಗಳು ಭಾರತದ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದ ವಿವಿಧ ಕಾರಣಗಳಿಗೆ ಬಳಸುತ್ತಾರೆ. ಕೆಂಪು ಬಣ್ಣ ಅಭಿವೃದ್ಧಿಯ ಸಂಕೇತ, ಅರಿಸಿಣ ಬಣ್ಣ ಆರೋಗ್ಯಕರ ಸಮಾಜದ ಸಂಕೇತವಾಗಿದೆ. ಇವೆರಡು ಮಂಗಳವನ್ನು ಮತ್ತು ಯೋಗಕ್ಷೇಮವನ್ನು ಸೂಚಿಸುತ್ತದೆ.
- ಕನ್ನಡ ಧ್ವಜ (kannada flag) ಯಾವುದೇ ಅಧಿಕೃತ ಸ್ಥಾನಮಾನ ಹೊಂದಿಲ್ಲ. ಈ ಧ್ವಜವನ್ನು ೧೯೬೫ರಲ್ಲಿ ಶ್ರೀ ಎಂ.ರಾಮಮೂರ್ತಿಯವರು ಪ್ರಾರಂಭಿಸಿದ ರಾಜಕೀಯ ಪಕ್ಷ ಕನ್ನಡ ಪಕ್ಷಕ್ಕೆ ಬಾವುಟವಾಗಿ ಹುಟ್ಟು ಹಾಕಲಾಯಿತ್ತು.
- ಆದರೆ ಧ್ವಜವನ್ನು ಕರ್ನಾಟಕದ ಎಲ್ಲಡೆ ಸ್ಥಿರವಾಗಿ ಕರ್ನಾಟಕ ಮತ್ತು ಕನ್ನಡ ಪ್ರತಿನಿಧಿಸಲು ಬಳಸಲಾಗುತ್ತಿದೆ. ಈ ಧ್ವಜವನ್ನು ನವೆಂಬರ್ ಒಂದರಂದು (November 1), ಕನ್ನಡ/ಕರ್ನಾಟಕ ರಾಜೋತ್ಸವದ ಸಂದರ್ಭದಲ್ಲಿ ಕರ್ನಾಟಕದ ಪ್ರತಿ ಸಾರ್ವಜನಿಕ ಸಂಸ್ಥೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಹಾರಿಸಿ, ಕರ್ನಾಟಕದ ನಾಡ ಗೀತೆಯಾದ ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ ಹಾಡನ್ನು ಹಾಡಲಾಗುತ್ತದೆ. [೩]
- ಕನ್ನಡ ಧ್ವಜವನ್ನು ಕರ್ನಾಟಕದ ಎಲ್ಲಾ ಕರ್ನಾಟಕ ಸರ್ಕಾರದ ಕಟ್ಟಡಗಳ ಮೇಲೆ, ಭಾರತದ ಧ್ವಜದ (Indian flag) ಜೊತೆ, ಭಾರತದ ಧ್ವಜಕ್ಕಿಂತ ಸ್ವಲ್ಪ ಕೆಳ ಭಾಗದಲ್ಲಿ ಹಾರಡುತ್ತಿರುವುದನ್ನು ನೋಡಬಹುದು. ಇತ್ತೀಚೆಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪನವರು ಸರ್ಕಾರದ ಕಟ್ಟಡಗಳ ಮೇಲೆ ಕರ್ನಾಟಕದ ಧ್ವಜ ಹಾರಿಸಬಾರದು ಎಂಬ ನಿರ್ಬಂಧನೆ ಹೇರಿದ್ದ ಸುತ್ತೋಲೆಯನ್ನು, ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದರಿಂದ ವಾಪಸ್ಸು ತೆಗೆದು ಕೊಂಡರು.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ
ಎರಡು ಪದಗಳಿಂದ ಒಂದು ಪದ ಕಂಡು ಹಿಡಿಯಿರಿ.
ಉದಾಹರಣೆಗೆ : ಸೀತಾಪತಿ + ನಗರ = ರಾಮನಗರ
- ಕಪಾಟು + ಊರು =
- ನವೀನ + ದುರ್ಗ =
- ರಾಣಿ + ಕೆರೆ =
- ಗಜ + ಕಲ್ =
- ವಿಷ + ಗೂಡು =
- ಚಹ + ನರಸೀಪುರ =
- ವಿಷ್ಣು + ಹರ =
- ಹಾವು + ಮಂಗಲ =
- ಹುಡುಗಿ + ಕುಮಾರಿ =
- ಪಾರ್ವತಿ + ಬಿದನೂರು =
- ಈಶ್ವರ + ಮೊಗ್ಗ =
- ಸಿನಿಮಾ + ದುರ್ಗ =
- ಪುರಾತನ + ಬೀಡು =
- ಕನಕ + ಪೇಟೆ =
- ಹಗ್ಗ + ವಾಡ =
- ದೇವಾಲಯ + ಬಂಡೆ =
- ಬಿಂದಿಗೆ + ಚಾದ್ರಿ =
- ಕ್ಷೇಮ + ನಗರ =
- ಔಷಧ + ಊರು =
- ಜೇನು + ಗಿರಿ =
- ಅಶ್ವ + ಮುಖ =
- ಜೋಪಾನ + ವತಿ =
- ಕಮಲ + ಕೆರೆ =
- ಹರ + ಗಂಗೆ =
Post a Comment
0Comments